ಆಲಿಫಾಂಟ್, ಮಾರ್ಗರೇಟ್ (೧೮೨೮-೯೭). ಸ್ಕಾಟ್ಲೆಂಡಿನ ಲೇಖಕಿ. ಕಾದಂಬರಿ, ಜೀವನಚರಿತ್ರೆ ಬರೆದಿದ್ದಾಳೆ. == ಜೀವನ == ೧೮೫೨ರಲ್ಲಿ ಫ್ರಾನ್ಸಿಸ್ ವಿಲ್ಸನ್ ಆಲಿಫಾಂಟ್ ಎಂಬಾತನನ್ನು ಮದುವೆಯಾದಳು. ೧೮೪೯ರಲ್ಲಿ ಪ್ರಕಟವಾದ ಮಿಸಸ್ ಮಾರ್ಗರೆಟ್ ಮೇಟ್ಲೆಂಡ್ ಎಂಬ ಈಕೆಯ ಕಾದಂಬರಿ ಹಾಸ್ಯ, ಕರುಣ ಪಾತ್ರರಚನೆಗಳ ಕೌಶಲದಿಂದ ಈಕೆಯ ಖ್ಯಾತಿಯನ್ನು ಹೆಚ್ಚಿಸಿತು. ಚರಿತ್ರೆ, ಜೀವನಕಥೆಗಳನ್ನೂ ಈಕೆ ಬರೆದಿದ್ದಾಳೆ. == ಸಾಹಿತ್ಯ == ಅವಸರದಿಂದ ಬರೆಯುತ್ತಿದ್ದುದರಿಂದ ಶೈಲಿ, ವಸ್ತುನಿರೂಪಣೆಗಳಲ್ಲಿ ಅನೇಕ ದೋಷಗಳು ಕಂಡುಬರುತ್ತವೆ. ದಿ ಕ್ರಾನಿಕಲ್ಸ್ ಆಫ್ ಕಾರ್ಲಿಂಗ್ ಫರ್ಡ್ (೧೮೬೩-೭೬), ದಿ ಮಿನಿಸ್ಟರ್ಸ್ ವೈಫ಼್ (೧೮೬೯), ಎಫಿ ಆಗಿಲ್ವಿ (೧೮೮೬), ಕರ್ಸಟೀನ್ (೧೮೯೦), ಎ ಬಿಲೀಗರ್ಡ್ ಸಿಟಿ (೧೮೮೦), ಎ ಲಿಟಲ್ ಪಿಲ್ಗ್ರಿಂ ಇನ್ ದಿ ಅನ್ ಸೀನ್ (೧೮೮೨) ಎಂಬ ಕಾದಂಬರಿಗಳನ್ನೂ ಸ್ಕೆಚಸ್ ಆಫ್ ದಿ ರೇನ್ ಆಫ್ ಜಾರ್ಜ್ (೧೮೬೯), ದಿ ಮೇಕರ್ಸ್ ಆಫ್ ಫ್ಲಾರೆನ್ಸ್ (೧೮೭೬), ಲಿಟರರಿ ಹಿಸ್ಟರಿ ಆಫ್ ಇಂಗ್ಲೆಂಡ್ ೧೭೯೦-೧೮೨೫ (೧೮೮೨), ರಾಯಲ್ ಎಡಿನ್ಬರೊ (೧೮೯೦), ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ, ಎಡ್ವರ್ಡ್ ಇರ್ವಿಂಗ್ - ಇವೇ ಮುಂತಾದ ಜೀವನಕಥೆ ಗಳನ್ನೂ ಜೀವನಚರಿತ್ರೆಗಳನ್ನೂ ಈಕೆ ಬರೆದಿದ್ದಾಳೆ. == ಬಾಹ್ಯ ಸಂಪರ್ಕಗಳು == – , , , , . : ' ' ' 2012-01-27 ವೇಬ್ಯಾಕ್ ಮೆಷಿನ್ ನಲ್ಲಿ. 2013-08-21 ವೇಬ್ಯಾಕ್ ಮೆಷಿನ್ ನಲ್ಲಿ.